Asto World
Address
Asto World
Teachers Colony
Koramangala
Bengaluru Karnataka
India - 560034
By Shyam Sundar G |
Fri, 07-Dec-2018, 14:50
?ಗುರು+ಕೇತು?
ಗುರು-ಜೀವ, ಕೇತು-ಮೋಕ್ಷ, ಒಂದು ಒಳ್ಳೆಯ ಪುಣ್ಯಕ್ಷೇತ್ರದಲ್ಲಿ ಜಾತಕನು ಹುಟ್ಟಿರುತ್ತಾನೆ, ದೇವಸ್ಥಾನ, ಒಳ್ಳೆಯ ನೀರಿನ ಕ್ಷೇತ್ರ ಸ್ಥಾನ ಅಥವಾ ದೇವಿಯಿರುವಂತಹ ಸ್ಥಳದಲ್ಲಿ ಸ್ನಾನ, ಜಾತಕನು ಹುಟ್ಟಿರುವಂತಹ ಸ್ಥಳ ಹುತ್ತವಿರುವಂತಹ ಸ್ಥಳವಾಗಿರುತ್ತದೆ, ಮನೆಯಿಂದ ಹೊರಗಡೆ ಹುಟ್ಟಿರುತ್ತಾನೆ, ಈ ವ್ಯಕ್ತಿಯು ಆಧ್ಯಾತ್ಮಿಕ ವಿಚಾರಗಳು/ವೇದಾಂತಗಳನ್ನು ಮಾತನಾಡುತ್ತಿರುತ್ತಾರೆ, ಆಧ್ಯಾತ್ಮಿಕವಾದ ಯೋಚನೆಗಳು ಇರುತ್ತದೆ, ಜ್ಯೋತಿಷ್ಯ ಕಲಿಯಲು ಕೇತುವಿನ ಇನ್ಫ಼್ಲುಯೆನ್ಸ್ ಇರಬೇಕು. ಅಧ್ಯಾತ್ಮಿಕ ವಿಚಾರಗಳು ಜಾಸ್ತಿಯಿರುತ್ತದೆ, ಹಣಕಾಸಿನ ಬಗ್ಗೆ ಇವರಿಂದ ಸಹಾಯ ಸಿಗುವುದಿಲ್ಲ, ಅಧ್ಯಾತ್ಮಿಕ ಕಡೆ ಏನು ಬೇಕಾದರೂ ಕೊಡುತ್ತಾರೆ, ಸಂಸಾರಿಕ ಜೀವನದ ಬಗ್ಗೆ ಒಳ್ಳೆಯ ಮಾರ್ಗದರ್ಶನ ಸಿಗುವುದಿಲ್ಲ, ಅವರಿಗೆ ಅವರದೇ ಆದ ಗುರಿ ಸ್ಥೀಮಿತವಾಗಿರುತ್ತಾರೆ, ತಾವು ಏನು ಅಂದು ಕೊಂಡಿರುತ್ತಾರೋ ಹಾಗೆಯೇ ಮಾಡುತ್ತಾರೆ, ಯಾವುದೇ ವಿಚಾರದಲ್ಲಿ ಲಿಮಿಟೇಷನ್ ಇರುವುದಿಲ್ಲ.
?ಶುಕ್ರ+ಕೇತು?
ದ್ರವ್ಯ ಪ್ರಾಪ್ತಿ ಇರುತ್ತದೆ, ಜಾತಕನಿಗೆ ಹಿಂದಿನವರು ಅಥವಾ ಅವರೇ ಬಿಟ್ಟು ಹೋದ ದ್ರವ್ಯ, ಮೇಷ/ವೃಶ್ಚಿಕದಲ್ಲಿ ಕುಜ ನಿದ್ದಾಗ-ಭೂಮಿ ಆದ್ದರಿಂದ ಭೂಮಿಯಲ್ಲಿ ಹುದುಗಿರುವ ದ್ರವ್ಯ ಸಿಗುವ ಸಾಧ್ಯತೆಯಿರುತ್ತದೆ, ಈ ದ್ರವ್ಯಗಳಿಗೆ ಸರ್ಪಗಾವಲು ಇರುತ್ತದೆ, ಹಿಂದಿನವರು ಹುತ್ತ ಇರುವ ಜಾಗದಲ್ಲಿ ಶೇಖರಣೆ ಮಾಡುತ್ತಿದ್ದರು ಇದನ್ನು ನಿಧಿ ಕುಂಬ ಎನ್ನುತ್ತಾರೆ. ಈ ರೀತಿ ಕಾಂಬಿನೇಷನ್ ಇದ್ದಾಗ ಜಾತಕನ ಹೆಂಡತಿಗೆ ಮೋಕ್ಷ ಚಿಂತನೆಯಿರುತ್ತದೆ, ಮೇಷ ಅಥವಾ ವೃಶ್ಚಿಕದಲ್ಲಿ ಶುಕ್ರ+ಕೇತು ಕಾಂಬಿನೇಷನ್ ಇದ್ದರೆ ಇಲ್ಲಿ ಗುಪ್ತ ನಿಧಿ ಪ್ರಾಪ್ತಿ ಇರುತ್ತದೆ.
ಜಾತಕನಿಗಿಂತಲೂ/ಜಾತಕನ ಹೆಂಡತಿಗೆ ಮೋಕ್ಷ ಚಿಂತನೆ ಇರುತ್ತದೆ, ಸಾಂಸಾರಿಕ ಜೀವನಕ್ಕೆ ತೊಡಕು, ಮನೆ/ಮಠ ದುಡ್ಡು ಎಲ್ಲಾ ಇದ್ದರೂ ಸಾಂಸಾರಿಕ ಸುಖದ ಬಗ್ಗೆ ಆಸಕ್ತಿಯಿರುವುದಿಲ್ಲ, ವೈರಾಗ್ಯದ ಸಾಮನ್ಯ ಜೀವನ ಗಂಡನೂ ಹಾಗೆ ಇದ್ದರೆ ಪರವಾಗಿಲ್ಲ, ಇಲ್ಲದಿದ್ದರೆ ತೊಂದರೆ.
ಕೇತು-ಬೇರು-ಕಮಲ, ಪದ್ಮ ಯೋಗ ಎನ್ನುತ್ತೇವೆ
This site was designed with Websites.co.in - Website Builder
We appreciate you contacting us. Our support will get back in touch with you soon!
Have a great day!
Please note that your query will be processed only if we find it relevant. Rest all requests will be ignored. If you need help with the website, please login to your dashboard and connect to support