Caution! Unverified Website!
The identity of this user has not yet been verified. Please make transactions at your own risk!
By Shyam Sundar G |
Sun, 09-Dec-2018, 07:55
*ಸ್ತ್ರೀಯರ ದ್ವಾದಶ ರಾಶಿಗಳ ಗುಣ ಹಾಗೂ ಯಾವ ರಾಶಿಯವರನ್ನು ಪತಿಯಾಗಿ ಸ್ವೀಕರಿಸಬಹುದು*
ಸ್ತ್ರೀಯರ ಹಾಗೂ ಪುರುಷ ರಾಶಿಗಳು ಒಂದೇ ಆದರೂ ಸ್ತ್ರೀಯರ ಗುಣ ಸ್ವಭಾವವು ಭಿನ್ನ ಭಿನ್ನವಾಗಿರುತ್ತದೆ..... ಏಕೆಂದರೆ ಸ್ತ್ರೀಯರಲ್ಲಿ ವಿಶೇಷವಾಗಿ ಲಜ್ಜೆ ಹಾಗೂ ಸಹನಾ ಶಕ್ತಿ ಹೆಚ್ಚು ಇರುತ್ತದೆ ಶ್ರೀ ಲಲಿತಾ ಸಹಸ್ರನಾಮದಲ್ಲಿ ಸ್ತ್ರೀಯನ್ನು ಶಕ್ತಿಗೆ ಹೋಲಿಸಿದರೆ ಪುರುಷನನ್ನು ಶಿವನಿಗೆ ಹೋಲಿಸಿ ಶಿವಶಕ್ತ್ರ್ಯೆಕರೂಪಿಣಿ ನಮಃ ಎಂದು ಕರೆದಿದ್ದಾರೆ ಪ್ರತಿಯೊಂದು ರಾಶಿಗೆ ಶತ್ರು ಮಿತ್ರ ಸಮ ರಾಶಿಗಳು ಇದೇ
*ಮೇಷ* ಮೇಷ ಎಂದರೆ ಅಡು ಈ ರಾಶಿಯಲ್ಲಿ ಜನಿಸಿದ ಸ್ತ್ರೀಯರು ಸಾಹಸಿಗಳು ಹೆಚ್ಚು ಮಹತ್ವಾಕಾಂಕ್ಷಿಯರು ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಇರುವವರು ಈ ರಾಶಿಯವರು ಪ್ರೇಮ ವಿವಾಹ ಆದರೆ ಅದು ಮುರಿದು ಬೀಳುವ ಸಂಭವ ಹೆಚ್ಚು ಪತಿಯು ತನ್ನ ಕೈಕೆಳಗೆ ಇರಬೇಕು ಎಂಬ ಅಪೇಕ್ಷೆ ಕೊಡುವವರು ತಮ್ಮ ಸೌಂದರ್ಯದ ಬಗ್ಗೆ ಅಹಂಕಾರ ಪಡುವವರು
ಮೇಷ ರಾಶಿಯ ಅಧಿಪತಿ ಕುಜ .....ಕುಜ ಗ್ರಹಕ್ಕೆ ಚಂದ್ರ ಗುರು ರವಿ ಮಿತ್ರ ಗ್ರಹಗಳು ಆದ್ದರಿಂದ ಇವರು ಕಟಕ ಸಿಂಹ ಧನಸ್ಸು ಹಾಗೂ ಮೀನ ರಾಶಿಯವರನ್ನು ಪತಿಯಾಗಿ ಸ್ವೀಕರಿಸಬಹುದು
*ವೃಷಭ* ವೃಷಭ ಎಂದರೆ ಎತ್ತು...ಸೌಮ್ಯ ಸ್ವಭಾವದವರು ಶಾಂತಿಯಿಂದ ಸಂಸಾರ ನಡೆಸಲು ಇಷ್ಟಪಡುವವರು ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುವವರು ಸಂಗೀತ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಇರುವವರು ಅವಕಾಶಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವವರು ಪ್ರೇಮ ವಿವಾಹದಲ್ಲಿ ಜಯ ಇರುತ್ತದೆ ಈ ರಾಶಿಯ ಅಧಿಪತಿ ಶುಕ್ರ ಗ್ರಹ ಇದಕ್ಕೆ ಬುಧ ಹಾಗೂ ಶನಿ ಮಿತ್ರ ಗ್ರಹ ವಾಗಿದ್ದರಿಂದ ಮಿಥುನ ಕನ್ಯಾ ಮಕರ ಹಾಗೂ ಕುಂಭ ರಾಶಿಯವರನ್ನು ಪತಿಯಾಗಿ ಸ್ವೀಕರಿಸಬಹುದು ಶುಕ್ರನಿಗೆ ರವಿ ಚಂದ್ರ ಶತ್ರು ಆಗಿರುವುದರಿಂದ ಸಿಂಹ ಹಾಗೂ ಕಟಕ ರಾಶಿಯವರನ್ನು ಪತಿಯಾಗಿ ಸ್ವೀಕರಿಸಬಾರದು
*ಮಿಥುನ* ಮಿಥುನ ಎಂದರೆ ಜೋಡಿ ಈ ರಾಶಿಯ ಸ್ತ್ರೀಯರು ಚಂಚಲ ಸ್ವಭಾವದವರು ತಮ್ಮ ಬುದ್ಧಿ ಚಾತುರ್ಯದಿಂದ ಪುರುಷರನ್ನು ತನ್ನತ್ತ ಆಕರ್ಷಿಸುವುದರಲ್ಲಿ ಅತಿ ಬುದ್ಧಿವಂತರು ಒಂದು ಸಲ ಅಮರ ಪ್ರೇಮದಂತೆ ವರ್ತಿಸಿ ತಕ್ಷಣವೇ ಪ್ರೇಮದ ಬಗ್ಗೆ ಅಸಡ್ಡೆಯಾಗಿ ವರ್ತಿಸುವರು ಈ ರಾಶಿಗೆ ಬುಧ ಅಧಿಪತಿ ಬುಧನಿಗೆ ರವಿ ಮತ್ತು ಶುಕ್ರ ಮಿತ್ರ ಗ್ರಹಗಳು ಆದ್ದರಿಂದ ಸಿಂಹ ವೃಷಭ ತುಲಾ ರಾಶಿಯವರನ್ನು ಪತಿಯಾಗಿ ಸ್ವೀಕರಿಸಬಹುದು
*ಕಟಕ* ಕಟಕ ಎಂದರೆ ಏಡಿ ಈ ರಾಶಿಯ ಸ್ತ್ರೀಯರು ಚರ ಸ್ವಭಾವದವರು ಅಧಿಕ ನಾಚಿಕೆ ಲಜ್ಜೆ ಸ್ವಭಾವದವರು ಅಪಾರ ಕಲ್ಪನಾ ಶೀಲರು ಗುರು ಹಿರಿಯರಲ್ಲಿ ಅತಿಯಾದ ಗೌರವವನ್ನು ಕಾಣುವವರು
ಈ ರಾಶಿಗೆ ಚಂದ್ರ ಅಧಿಪತಿ ಆಗಿರುವನು ಚಂದ್ರನಿಗೆ ಶತ್ರು ಗ್ರಹ ಯಾರೂ ಇಲ್ಲದಿರುವುದರಿಂದ ಇವರು ಎಲ್ಲ ರಾಶಿಯಾರೊಡನೆ ಬೆರೆಯುವುದರಿಂದ ಯಾವ ರಾಶಿಯವರನ್ನಾದರೂ ಪತಿಯಾಗಿ ಸ್ವೀಕರಿಸಬಹುದು
*ಸಿ೦ಹ** ಜಗತ್ತನ್ನು ಅಳೆಯುವ ವಿಷ್ಣುವಿನ ಮೊದಲ ಹೆಜ್ಜೆ ಸಿಂಹದಂತೆ ಇದ್ದರಿಂದ ಇದು ಸಿಂಹ ರಾಶಿಯಾಗಿದೆ ಈ ರಾಶಿಯ ಸ್ತ್ರೀಯರು ಹಠವಾದಿಗಳು ಅಹಂಕಾರಿಗಳು ತನ್ನ ಸೌಂದರ್ಯದ ಬಗ್ಗೆ ಅಭಿಮಾನ ಉಳ್ಳವರು ಇವರು ಸ್ವಚ್ಛಂದ ಜೀವನವನ್ನು ಬಯಸುವವರು ಈ ರಾಶಿಯವರಿಗೆ ಹೆಚ್ಚು ವಿವಾಹ ವಿಚ್ಛೇದನ ಉಂಟಾಗುವುದು ಪ್ರೇಮ ವಿವಾಹದಲ್ಲಿ ದುಃಖವೇ ಹೆಚ್ಚು ಈ ರಾಶಿಗೆ ರವಿ ಅಧಿಪತಿ ಆಗಿರುವರು ಇವರಿಗೆ ಚಂದ್ರ ಕುಜ ಗುರು ಮಿತ್ರರು ಆದ್ದರಿಂದ ಕಟಕ ಮೇಷ ವೃಶ್ಚಿಕ ಧನಸ್ಸು ಹಾಗೂ ಮೀನ ರಾಶಿಯ ಪತಿಯೊಡನೆ ಉತ್ತಮ ಜೀವನ ನಡೆಸುವವರು ರವಿಗೆ ಶುಕ್ರ ಹಾಗೂ ಶನಿ ಶತ್ರುವಾಗಿರುವುದರಿಂದ ವೃಷಭ ತುಲಾ ಮಕರ ಹಾಗೂ ಕುಂಭ ರಾಶಿಯವರನ್ನು ಪತಿಯಾಗಿ ಸ್ವೀಕರಿಸಬಾರದು
This site was designed with Websites.co.in - Website Builder
This website was created by a user of Websites.co.in, a free instant website builder. Websites.co.in does NOT endorse, verify, or guarantee the accuracy, safety, or legality of this site's content, products, or services. Always exercise caution—do not share sensitive data or make payments without independent verification. Report suspicious activity by clicking the report abuse below.
Caution! Unverified Website!
The identity of this user has not yet been verified. Please make transactions at your own risk!
We appreciate you contacting us. Our support will get back in touch with you soon!
Have a great day!